ಬಾಹ್ಯಾಕಾಶಕ್ಕೆ ಹೋಗೋಣ

ಭೂಮಿಯ ವಾತಾವರಣವನ್ನು ಮೀರಿ ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆಯು ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಈ ಕಲ್ಪನೆಗೆ ಸಾಹಸಿ ಗುಣ ಬೆರೆತಿದ್ದರಿಂದ, ತಂತ್ರಜ್ಞಾನವೂ ಸಹಾಯ ಮಾಡಿದ್ದರಿಂದ, ಅಂತರಿಕ್ಷದಲ್ಲಿ ತೇಲುವ ಅನುಭವವು ಈಗ ಕಲ್ಪನೆಯ ಪರಿಧಿಯನ್ನು ಮೀರಿ, ವಾಸ್ತವ ರೂಪ ತಾಳಿದೆ.